ನಾಯಿಗಳೇ ಅರಚುವಿರೇಕೆ,ನಮಗೆ ನಿದ್ದೆ ಬಾರದ ಹಾಗೆ.
ಯಾರು ಕಲಿಸಿದರೋ ನಿಮಗೆ,
ಸುಖ ನಿದ್ದೆ ಕೆಡಿಸುವ ಹೊಸ ಬಗೆ,
ದೂರದೆಲ್ಲಿಯದೋ ಶಬ್ಧಕೆ,
ಇಲ್ಲಿಂದಲೇ ಪ್ರತಿಧ್ವನಿ ಏಕೆ?
ಹೋಗಬಾರದೆ ಅಲ್ಲಿಗೇ,
ಇಲ್ಲಿಯೇ ಅಬ್ಬರಿಸಬೇಕೆ?
ಇದೇನು ದೇವರಿಗೆ ನಿಮ್ಮ ಪ್ರಾರ್ಥನೆಯೋ ?
ಸಂಗೀತದ ರಸಸಂಜೆಗೆ ರೂಢಿಯೋ,
ಹಸಿವಿನಿಂದ ಕಂಗೆಟ್ಟ ರೊದನೆಯೋ
ಸ್ವಚ್ಛಂದ ಬಾಳ ಭಿಕ್ಷೆಗೆ ಮೊರೆಯೋ ?
ಯಾಕೀ ಚೀತ್ಕಾರ, ನಮ್ಮೆಡೆಗೆ ತಿರಸ್ಕಾರ,
ನಾವೇನ ಮಾಡಿರಿವೆವು ನಿಮಗಪಕಾರ
ಅದೇಕೆ ನಮ್ಮ ಮೇಲೆ ಕೋಪ ಈ ಪರಿ,
ಸುಮ್ಮನಿರುವ ನಮಗೇಕೆ ತೊಂದರೆ ನೀಡುವಿರಿ?













