ಸಂಗಾತಿ ಸಿಕ್ಕಳೆಂದು,ಪ್ರೀತಿಯಲ್ಲಿ ಬಿದ್ದೆನೆಂದು
ಖುಷಿಯಲ್ಲಿ ಮೈಯ ಮರೆತು,
ಜಗಕೆಲ್ಲಾ ಸಾರಿ ಹೇಳೋ
ನಾವು ಹುಡುಗರು, ಅದೇಷ್ಟು ಮೂರ್ಖರು!
ಸಂಗಾತಿ ಕರೆದಳೆಂದು,
ಮೈಲುದ್ದ ಸಾಲಲ್ಲಿ ನಿಂತು,
ಚೀಟಿ ಪಡೆದು, ಪಕ್ಕ ಕುಳಿತು,
ಬೋರು ಹೊಡೆಸೋ ಸಿನಿಮಾ ನೋಡೊ,
ನಾವು ಹುಡುಗರು, ಅದೇಷ್ಟು ಮೂರ್ಖರು!
ಸಂಗಾತಿಗೆ ಇಷ್ಟ ಎಂದು,
ದುಬಾರಿ ಹೋಟೆಲ್ಲಿಗೆ ಕರೆದು,
ದುಡ್ಡು ಸುರಿದು,ತಿಂದು ಕುಡಿದು,
ಹುಡುಗಿ ಮನಸ, ಗೆದ್ದೆನೆಂದು, ಬೀಗೊ,
ನಾವು ಹುಡುಗರು, ಅದೇಷ್ಟು ಮೂರ್ಖರು!
ಸಂಗಾತಿ ನುಡಿದಳೆಂದು,
ಕಣ್ಣೀರ ಹರಿಸಿದಳೆಂದು,
ಗಟ್ಟಿಯಾಗಿ ಕೈಯ ಹಿಡಿದು
ಮದುವೆಯಾಗಿ, ಬಂಧಿಯಾಗೋ
ನಾವು ಹುಡುಗರು, ಅದೇಷ್ಟು ಮೂರ್ಖರು!
-----ಮಹಾ,
ಬರೀ ಮೂರ್ಖರಲ್ಲ, ಶತ ಮೂರ್ಖರು!!!!!
ReplyDelete