Thursday, December 31, 2009

ಮರಳಿ ಮರಳುವಾಸೆ

ಮರಳುವಾಸೆ ಮರಳಿ ನನ್ನಾ ಊರಿಗೆ
ಮಮತೆಯಲಿ ಕರೆಯುತಿಹ ಅಮ್ಮನಾ ಮಡಿಲಿಗೆ!!

ಮನ ತಣಿಸುವ ಹಸಿರು ಸುಂದರ ಕಾಡಿಗೆ
ಮೋಹಕ ಕಣಿವೆಗಳ ಸೈಹಾದ್ರಿಯ ನಾಡಿಗೆ!
ಮಧುರ ಗಾನದಲಿ ನಲಿವ ಹಕ್ಕಿಗಳ ಗೂಡಿಗೆ
ಮರದೆಲೆಗಳ ನಡುವೆ ಇಣುಕುವ ಕಿರಣಗಳ ಬಳಿಗೆ!!

ಮಂದಹಾಸದಿ ನಗುತಿಹ ಕಾಡು ಹೂಗಳ ತವರಿಗೆ
ಮತ್ತೇರಿಸಿ ಬಳಿಗೆ ಕರೆಯುತಿಹ ಜನ್ಮ ಭೂಮಿಗೆ!
ಮೌನದಲೆ ನೆನೆಸುತಿಹ ಕರುಳ ಕೊಗಿನೆಡೆಗೆ
ಮರೆಯದೆ ಸೆಳೆಯುತಿಹ ಬಾಲ್ಯದೆಡೆಗೆ!!

ಮಸಣದಂತಿಹ ಈ ನಗರ, ಬಲುಕಷ್ಟ ಬಾಳ್ವೆಗೆ
ಮುಗ್ಧತೆಗೆ ನೆಲೆಯಿಲ್ಲ, ಎಲ್ಲಕಡೆ ವಂಚನೆ ಸುಲಿಗೆ!
ಮಸುಕು ತುಂಬಿದ ಮನ ಅರಸುತಿದೆ ದೀವಿಗೆ
ಮತ್ತೆ ಮತ್ತೆ ಮರಳೆನ್ನುತಿದೆ ಮನ ಊರಿಗೆ!!
ಮತ್ತೆ ಮತ್ತೆ ಮರಳೆನ್ನುತಿದೆ ಮನ ಊರಿಗೆ!!

--ಮಹಾ